ಎಲ್ಪಿಜಿ ಕನೆಕ್ಷನ್ನ್ನಲ್ಲಿ ನಿಯಮಿತೀಕರಣ ಮತ್ತು
ಹೆಸರು ಬದಲಾಯಿಸುವ ಪ್ರಕ್ರಿಯೆ
ಎಲ್ಪಿಜಿ ಕನೆಕ್ಷನ್ನ ನಿಯಮಿತೀಕರಣ :
ನಿದರ್ಶನ 1
ಯಾವ ವ್ಯಕ್ತಿಯ ಬಳಿ ಅಧೀಕೃತ ಸಿಲೆಂಡರ್ ಪ್ರೆಶರ್ ರೆಗ್ಯುಲೇಟರ್ ಇದೆಯೋ, ಆತ ಗ್ರಾಹಕನ ಸಹಮತಿಯಿಂದ ಕನೆಕ್ಷನ್ನ್ನು ನಿಯಮಿತ ಮಾಡಲು ಬಯಸುತ್ತಾನೆ.
- ಕನೆಕ್ಷನ್ನ್ನು ಬೇರೆಯವರಿಗೆ ವರ್ಗಾಯಿಸುವಾಗ ಪ್ರಸ್ತುತ ಕನೆಕ್ಷನ್ ಹೊಂದಿರುವ ಗ್ರಾಹಕರ ಘೋಷಣೆ / ಸಮ್ಮತಿ ಪತ್ರ ಬೇಕಾಗುತ್ತದೆ.
- SV ಮತ್ತು ಸಲಕರಣೆಗಳ ನೋಂದಾಯಿತ ಗ್ರಾಹಕರಿಂದ ಘೋಷಣೆಯು ಅಂತಹ ಕನೆಕ್ಷನ್ನ ಯಾವುದೇ ಹಕ್ಕು ವರ್ಗಾವಣೆಯ ವಿರುದ್ಧ ತೈಲ ಕಂಪನಿಗೆ ಪರಿಹಾರ ನೀಡುತ್ತದೆ. - ವಿತರಕರ ಬಳಿ ಲಭ್ಯವಿರುವ ಫಾರ್ಮೇಟ್/ಸ್ವರೂಪಗಳು
- ವಿತರಕರು ದಾಖಲೆಗಳ ವಿವರಗಳನ್ನು ಪರಿಶೀಲಿಸುತ್ತಾರೆ. ಅವು ಕ್ರಮವಾಗಿದ್ದಲ್ಲಿ, ಮೂಲ ಎಸ್ವಿ ಹೊಂದಿರುವವರ ಹೆಸರಿನಲ್ಲಿ ಟಿವಿಯನ್ನು ಸಿದ್ಧಪಡಿಸುತ್ತಾರೆ ಮತ್ತು ಆಯಿಲ್ ಕಂಪನಿಗೆ ಪರಿಹಾರ ನೀಡುವ ವ್ಯಕ್ತಿಗೆ ಭದ್ರತಾ ಠೇವಣಿ ಮೊತ್ತವನ್ನು ಮರುಪಾವತಿಸುತ್ತದೆ.
- ಚಾಲ್ತಿಯಲ್ಲಿರುವ ದರದಲ್ಲಿ ಭದ್ರತಾ ಠೇವಣಿಯನ್ನು ಉಪಕರಣ ಹೊಂದಿರುವವರಿಂದ ಸಂಗ್ರಹಿಸಲಾಗುತ್ತದೆ. ಮತ್ತು ಅವರ ಹೆಸರಿನಲ್ಲಿ ಒಂದು ಹೊಸ ಎಸ್ವಿಯನ್ನು ಸಿಧ್ಧಪಡಿಸಲಾಗುತ್ತದೆ.
- ಎಸ್ವಿ ಕಳೆದುಹೋದ ಸಂದರ್ಭದಲ್ಲಿ, ಎಸ್ವಿಯ ನಷ್ಟದ ಹೊಣೆಗಾರಿಕೆಯನ್ನು ಸಲ್ಲಿಸಬೇಕು.
ನಿದರ್ಶನ 2
ಯಾವುದೇ ಕನೆಕ್ಷನ್ನ ದಾಖಲೆಗಳಿಲ್ಲದೆ ಸಿಲಿಂಡರ್ರ್ಗಳು ಮತ್ತು ಪ್ರೆಶರ್ ರೆಗ್ಯುಲೇಟರ್ಗಳನ್ನು ಹೊಂದಿರುವ ವ್ಯಕ್ತಿ:
- ಕನೆಕ್ಷನ್ಗೆ ಯಾವುದೇ ದಾಖಲೆ (SV/DGCC) ಇಲ್ಲದೆ LPG ಉಪಕರಣಗಳನ್ನು ಹೊಂದಿರುವ ವ್ಯಕ್ತಿಗಳು, ಅಂಡರ್ಟೇಕಿಂಗ್/ಹೊಣೆಗಾರಿಕೆ ಸಲ್ಲಿಸಬೇಕು ಮತ್ತು ಪ್ರಸ್ತುತ ಚಾಲ್ತಿಯಲ್ಲಿರುವ ದರದಲ್ಲಿ ಸಲಕರಣೆಗಳ ಸಂಪೂರ್ಣ ಭದ್ರತಾ ಠೇವಣಿಯನ್ನು ಪಾವತಿಸಬೇಕು.
ನಿದರ್ಶನ 3
ಕನೆಕ್ಷನ್ ಹೊಂದಿರುವವರ ಮರಣದಿಂದಾಗಿ ಸಂಪರ್ಕದ ವರ್ಗಾವಣೆ:
- ಮೃತರ ಉತ್ತರಾಧಿಕಾರಿಗಳು ಮೂಲ SV (i) ಮರಣ ಪ್ರಮಾಣಪತ್ರ ಮತ್ತು (ii) ಕಾನೂನು ಉತ್ತರಾಧಿಕಾರಿ ಪ್ರಮಾಣಪತ್ರದ ಪ್ರತಿ / ಇತರ ಕಾನೂನು ಉತ್ತರಾಧಿಕಾರಿಗಳಿಂದ ನಿರಪೇಕ್ಷಣಾ ಪತ್ರ ಎನ್ಓಸಿ / ಹೊಣೆಗಾರಿಕೆ ಪತ್ರವನ್ನು ಸಲ್ಲಿಸಬೇಕು. ಮೂಲ ಎಸ್ವಿಯಂತೆ ಠೇವಣಿ ಮಾಡಿದ ಮೊತ್ತದ ಮೇಲೆ ಕಾನೂನು ಉತ್ತರಾಧಿಕಾರಿಯ ಹೆಸರಿನಲ್ಲಿ ಹೊಸ ಎಸ್ವಿಯನ್ನು ನೀಡಲಾಗುತ್ತದೆ.
- ಮೂಲ SV ಯಲ್ಲಿರುವಂತೆ ಅದೇ ಠೇವಣಿಯ ಮೇಲೆ ಕಾನೂನು ಉತ್ತರಾಧಿಕಾರಿಯ ಹೆಸರಿನಲ್ಲಿ ಹೊಸ SVಯನ್ನು ನೀಡಲಾಗುತ್ತದೆ.
ಗ್ರಾಹಕರ ಜೀವಿತಾವಧಿಯಲ್ಲಿ ಹೆಸರಿನಲ್ಲಿ ಬದಲಾವಣೆ:
- ಹೆಸರಿನ ಬದಲಾವಣೆಯು ಸಾಮಾನ್ಯ ಯೋಜನೆಯ ಅಡಿಯಲ್ಲಿ ಬಿಡುಗಡೆಯಾದ ಕನೆಕ್ಷನ್ಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು PMUY ಅಡಿಯಲ್ಲಿ ಬಿಡುಗಡೆಯಾದ ಕನೆಕ್ಷನ್ಗಳಿಗೆ ಅನ್ವಯಿಸುವುದಿಲ್ಲ.
- LPG ಸಂಪರ್ಕದ ವರ್ಗಾವಣೆಗೆ ಅನುಮತಿ ಸಿಗುತ್ತದೆ,
ಎ) ಕುಟುಂಬದೊಳಗೆ (ಅಂದರೆ ತಂದೆ, ತಾಯಿ, ಮಗ, ಮಗಳು, ಸಹೋದರ, ಸಹೋದರಿ, ಸಂಗಾತಿ, ಮಕ್ಕಳು) ಅನುಮತಿಸಲಾಗಿದೆ. ಅಂತಹ ವರ್ಗಾವಣೆಯ ಸಂದರ್ಭದಲ್ಲಿ ಭದ್ರತಾ ಠೇವಣಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಬಿ) ಕುಟುಂಬದ ಹೊರಗಿನ ಸದಸ್ಯರಿಗೆ ಚಾಲ್ತಿಯಲ್ಲಿರುವ ದರದಲ್ಲಿ ಭದ್ರತಾ ಠೇವಣಿ ಬದಲಾಗುತ್ತದೆ. ಭದ್ರತಾ ಠೇವಣಿಯ ವ್ಯತ್ಯಾಸದ ಮೊತ್ತವನ್ನು ವರ್ಗಾವಣೆದಾರರು ಪಾವತಿಸಬೇಕಾಗುತ್ತದೆ.
- ಕುಟುಂಬದ ಸದಸ್ಯರ ಪರವಾಗಿ ನೋಂದಯಿತ ಗ್ರಾಹಕರು ಲಿಖಿತ ಒಪ್ಪಿಗೆಯನ್ನು ಸಲ್ಲಿಸಬೇಕು. ಅಂತಹ ವರ್ಗಾವಣೆಯ ಖಾತೆಯಲ್ಲಿಆಯಿಲ್ ಕಂಪನಿಯ ಯಾವುದೇ ಕ್ಲೇಮ್ಗಳಿದ್ದರೆ ಅದೂ ಸಹ ಕುಟುಂಬದ ಯಾವ ಸದಸ್ಯನ ಹೆಸರಿಗೆ ವರ್ಗಾವಣೆ ಮಾಡಲಾಗುತ್ತಿದೆಯೋ, ಆತನಿಗೆ ಸಲ್ಲುತ್ತದೆ. - ಫಾರ್ಮೇಟ್ ವಿತರಕರ ಬಳಿ ಲಭ್ಯವಿರುತ್ತದೆ.
- ಟರ್ಮಿನೇಷನ್ ವೋಚರ್ (ಟಿವಿ) ಮೂಲಕ ಮೂಲ ಸಂಪರ್ಕವನ್ನು ಕೊನೆಗೊಳಿಸಲಾಗುತ್ತದೆ. ಹೊಸ ಚಂದಾದಾರಿಕೆ ವೋಚರ್ (SV) ಅನ್ನು ವರ್ಗಾವಣೆ ಮಾಡುವವರು/ನಿಯಮಿತ ಗ್ರಾಹಕರ ಹೆಸರಿನಲ್ಲಿ ನೀಡಲಾಗುತ್ತದೆ.
ಗಮನಿಸಿ: ನಿಯಮಿತೀಕರಣ /ಹೆಸರು ಬದಲಾವಣೆಯ ಮೇಲಿನ ಎಲ್ಲಾ ಪ್ರಕರಣಗಳಲ್ಲಿ, ವರ್ಗಾವಣೆದಾರರು PSU ತೈಲ ಕಂಪನಿಯ ಯಾವುದೇ LPG ಸಂಪರ್ಕವನ್ನು ಹೊಂದಿರಬಾರದು ಮತ್ತು ಸರಿಯಾಗಿ ಭರ್ತಿ ಮಾಡಿದ ಜೊತೆಗೆ ಗುರುತು ಮತ್ತು ವಿಳಾಸದ ಪುರಾವೆಯ, KYC ಫಾರ್ಮ್ ಅನ್ನು ಸಲ್ಲಿಸಬೇಕು. ಸಲ್ಲಿಸಿದ ದಾಖಲೆಗಳ ಆಧಾರದ ಮೇಲೆ ಡಿ-ಡುಪ್ಲಿಕೇಶನ್ ಪರಿಶೀಲನೆಯ ನಂತರ ಮಾತ್ರ ಸಂಪರ್ಕವನ್ನು ಅನುಮೋದಿಸಲಾಗುತ್ತದೆ ಮತ್ತು ಯಶಸ್ವಿ ಹಿಂಪಡೆಯುವಿಕೆಯ ಪರಿಶೀಲನೆಯ ನಂತರ, ಹೊಸ ಎಸ್ವಿಯನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗುತ್ತದೆ.