ಉಜ್ವಲ 1.0 ರಿಂದ ಉಜ್ವಲ 2.0 ವರೆಗಿನ ಪ್ರಯಾಣ
2016 ರಲ್ಲಿ ಉಜ್ವಲ 1.0 ಅನ್ನು ಪ್ರಾರಂಭಿಸಿದಾಗ, ಬಿಪಿಎಲ್ ಕುಟುಂಬಗಳ 5 ಕೋಟಿ ಮಹಿಳಾ ಸದಸ್ಯರಿಗೆ ಎಲ್ಪಿಜಿ ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ನಿಗದಿಪಡಿಸಲಾಗಿತ್ತು. ತರುವಾಯ, ಏಪ್ರಿಲ್ 2018 ರಲ್ಲಿ ಇನ್ನೂ ಏಳು ವರ್ಗಗಳ (ಎಸ್ಸಿ/ಎಸ್ಟಿ, ಪಿಎಮ್ಎವೈ, ಎಎವೈ, ಅತ್ಯಂತ ಹಿಂದುಳಿದ ವರ್ಗಗಳು, ಚಹಾ ತೋಟ, ಅರಣ್ಯವಾಸಿಗಳು, ದ್ವೀಪವಾಸಿಗಳು) ಮಹಿಳಾ ಫಲಾನುಭವಿಗಳನ್ನು ಸೇರಿಸುವ ಮೂಲಕ ಯೋಜನೆಯನ್ನು ವಿಸ್ತರಿಸಲಾಯಿತು. ಅಲ್ಲದೆ, ಗುರಿಯನ್ನು 8 ಕೋಟಿ ಎಲ್ಪಿಜಿ ಕನೆಕ್ಷನ್ಗಳಿಗೆ ಪರಿಷ್ಕರಿಸಲಾಗಿದೆ. ಈ ಗುರಿಯನ್ನು ಆಗಸ್ಟ್ 2019 ರಲ್ಲಿ, ನಿಗದಿಪಡಿಸಿದ್ದ ದಿನಾಂಕಕ್ಕಿಂತ ಏಳು ತಿಂಗಳ ಮುಂಚಿತವಾಗಿಯೇ ಸಾಧಿಸಲಾಗಿದೆ.
ಆರ್ಥಿಕ ವರ್ಷ 21-22 ರ ಯೂನಿಯನ್ ಬಜೆಟ್ನಲ್ಲಿ, ಪಿಎಮ್ಯುವೈ ಯೋಜನೆಯಡಿಯಲ್ಲಿ ಹೆಚ್ಚುವರಿ ಒಂದು ಕೋಟಿ ಎಲ್ಪಿಜಿ ಕನೆಕ್ಷನ್ಗಳಿಗೆ ಅವಕಾಶವನ್ನು ಘೋಷಿಸಲಾಗಿದೆ. ಈ ಒಂದು ಕೋಟಿ ಹೆಚ್ಚುವರಿ ಪಿಎಮ್ಯುವೈ ಕನೆಕ್ಷನ್ಗಳು (ಉಜ್ವಲ 2.0 ಅಡಿಯಲ್ಲಿ) ಪಿಎಮ್ಯುವೈನ ಹಿಂದಿನ ಹಂತದ ಅಡಿಯಲ್ಲಿ, ಒಳಗೊಳ್ಳಲು ಸಾಧ್ಯವಾಗದ ಕಡಿಮೆ-ಆದಾಯದ ಕುಟುಂಬಗಳಿಗೆ ಠೇವಣಿ-ಮುಕ್ತ ಎಲ್ಪಿಜಿ ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಹೊಂದಿವೆ.
ಠೇವಣಿ ರಹಿತ ಎಲ್ಪಿಜಿ ಸಂಪರ್ಕದ ಜೊತೆಗೆ, ಉಜ್ವಲ 2.0 ಫಲಾನುಭವಿಗಳಿಗೆ ಮೊದಲ ಮರುಪೂರಣ ಮತ್ತು ಹಾಟ್ಪ್ಲೇಟ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಅಲ್ಲದೆ, ದಾಖಲಾತಿ ಪ್ರಕ್ರಿಯೆಗೆ ಕನಿಷ್ಠ ದಾಖಲೆಗಳ ಅಗತ್ಯವಿರುತ್ತದೆ. ಉಜ್ವಲ 2.0 ರಲ್ಲಿ, ವಲಸಿಗರು ಪಡಿತರ ಚೀಟಿ ಅಥವಾ ವಿಳಾಸ ಪುರಾವೆಗಳನ್ನು ಸಲ್ಲಿಸುವ ಅಗತ್ಯವಿಲ್ಲ. 'ಕುಟುಂಬದ ಘೋಷಣೆ' ಮತ್ತು 'ವಿಳಾಸದ ಪುರಾವೆ' ಎರಡಕ್ಕೂ ಸ್ವಯಂ ಘೋಷಣೆ ಸಾಕಾಗುತ್ತದೆ. ಪ್ರಧಾನಮಂತ್ರಿಯವರ ಆಕಾಂಕ್ಷೆಯಾದ ʼಉಜ್ವಲ 2.0 ಎಲ್ಪಿಜಿಗೆ ಸಾರ್ವತ್ರಿಕ ಪ್ರವೇಶʼವನ್ನು ಸಾಧಿಸಲು ಸಹಾಯವಾಗುತ್ತದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರುವರು.