ಮೇ 2016 ರಲ್ಲಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (MOPNG), ಗ್ರಾಮೀಣ ಮತ್ತು ವಂಚಿತ ಕುಟುಂಬಗಳಿಗೆ ಎಲ್‌ಪಿಜಿಯಂತಹ ಶುದ್ಧ ಅಡುಗೆ ಇಂಧನವನ್ನು ಲಭ್ಯವಾಗುವಂತೆ ಮಾಡುವ ಉದ್ದೇಶದೊಂದಿಗೆ 'ಪ್ರಧಾನ ಮಂತ್ರಿ ಉಜ್ವಲ ಯೋಜನೆ' (PMUY) ಎನ್ನುವ ಯೋಜನೆಯನ್ನು ಪರಿಚಯಿಸಿತು.ಅವರು ಸಾಂಪ್ರದಾಯಿಕ ಅಡುಗೆ ಇಂಧನಗಳಾದ ಉರುವಲು, ಕಲ್ಲಿದ್ದಲು, ಹಸುವಿನ ಸಗಣಿ/ಬೆರಣಿ ಇತ್ಯಾದಿಗಳನ್ನು ಬಳಸುತ್ತಿದ್ದರು. ಸಾಂಪ್ರದಾಯಿಕ ಅಡುಗೆ ಇಂಧನಗಳ ಬಳಕೆಯು ಗ್ರಾಮೀಣ ಮಹಿಳೆಯರ ಆರೋಗ್ಯದ ಮೇಲೆ ಮತ್ತು ಪರಿಸರದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ.
ಈ ಯೋಜನೆಯನ್ನು ಮೇ 1, 2016 ರಂದು ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಭಾರತದ ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ. ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದರು.
ಮಾರ್ಚ್ 2020 ರೊಳಗೆ 8 ಕೋಟಿ ವಂಚಿತ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕಗಳನ್ನು ಬಿಡುಗಡೆ ಮಾಡುವುದು ಈ ಯೋಜನೆಯ ಗುರಿಯಾಗಿದೆ.
"ಸೆಪ್ಟೆಂಬರ್ 7, 2019 ರಂದು, ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ 8 ನೇ ಕೋಟಿ ಎಲ್‌ಪಿಜಿ ಕನೆಕ್ಷನ್ ನ್ನು ಹಸ್ತಾಂತರಿಸಿದರು.
ಉಜ್ವಲ 2.0: ವಲಸೆ ಕುಟುಂಬಗಳಿಗೆ ವಿಶೇಷ ಸೌಲಭ್ಯದೊಂದಿಗೆ PMUY ಯೋಜನೆಯಡಿಯಲ್ಲಿ 1.6 ಕೋಟಿ LPG ಸಂಪರ್ಕಗಳ ಹೆಚ್ಚುವರಿ ಹಂಚಿಕೆ. ಉಜ್ವಲ 2.0 ಅಡಿಯಲ್ಲಿ ಡಿಸೆಂಬರ್ 22 ರ ಸಮಯದಲ್ಲಿ ಸಂಪರ್ಕಗಳ ಗುರಿಯನ್ನು ಸಾಧಿಸಲಾಗಿದೆ, ಹೀಗಾಗಿ ಯೋಜನೆಯ ಅಡಿಯಲ್ಲಿ ಒಟ್ಟಾರೆ ಸಂಪರ್ಕಗಳನ್ನು 9.6 ಕೋಟಿಗೆ ತೆಗೆದುಕೊಂಡಿದೆ.
ಭಾರತ ಸರ್ಕಾರವು PMUY ಯೋಜನೆಯಡಿ ಹೆಚ್ಚುವರಿ 75 ಲಕ್ಷ ಸಂಪರ್ಕಗಳನ್ನು ಬಿಡುಗಡೆ ಮಾಡಲು ಅನುಮೋದಿಸಿದೆ, ಯೋಜನೆಯಡಿ ಒಟ್ಟಾರೆ ಗುರಿಯನ್ನು 10.35 ಕೋಟಿಗೆ ತೆಗೆದುಕೊಂಡಿದೆ, ಅದರ ವಿರುದ್ಧ ಈಗ ಸಂಪರ್ಕಗಳನ್ನು ಬಿಡುಗಡೆ ಮಾಡಲಾಗುತ್ತಿದೆ.