ಉಜ್ವಲ 2.0ದ ಬಗ್ಗೆ ಹೆಚ್ಚು ಕೇಳಲಾಗುವ ಪ್ರಶ್ನೆಗಳು

M- 13017 (11)/2/2021 - LPG-PNG dt.20.05.21 ಉಲ್ಲೇಖವನ್ನು ಹೊಂದಿರುವ ಪಿಎಮ್‌ಯುವೈ ಅವಲೋಕನ ಪತ್ರದ ಅಡಿಯಲ್ಲಿ 1 ಕೋಟಿ LPG ಕನೆಕ್ಷನ್‌ಗಳ ಬಿಡುಗಡೆಯನ್ನು MoPNG ಅನುಮೋದಿಸಿದೆ. ಅವುಗಳ ಬಗ್ಗೆ ಹೆಚ್ಚು ಕೇಳಲಾಗುವ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳು ಈ ಕೆಳಗಿನಂತಿವೆ.

ತನ್ನ ಮನೆಯಲ್ಲಿ ಎಲ್‌ಪಿಜಿ ಕನೆಕ್ಷನ್ ಹೊಂದಿಲ್ಲದ,ಬಡ ಕುಟುಂಬಕ್ಕೆ ಸೇರಿದ ವಯಸ್ಕ ಮಹಿಳೆ, ಉಜ್ವಲ 2.0 ಯೋಜನೆಯ ಫಲಾನುಭವಿಯಾಗಲು ಅರ್ಹರಾಗಿರುತ್ತಾರೆ. ಫಲಾನುಭವಿಗಳು ಈ ಕೆಳಗಿನ ಯಾವುದೇ ವರ್ಗಗಳಿಗೆ ಸೇರಿದವರಾಗಿರಬೇಕು:

  • SECC 2011 ಪಟ್ಟಿಯ ಪ್ರಕಾರ ಅರ್ಹರಿರುವವರು
  • SC, ST, ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY), ಅತ್ಯಂತ ಹಿಂದುಳಿದ ವರ್ಗಗಳು (MBC), ಅಂತ್ಯೋದಯ ಅನ್ನ ಯೋಜನೆ (AAY), ಚಹಾ ಮತ್ತು ಮಾಜಿ ಚಹಾ ತೋಟದ ಬುಡಕಟ್ಟುಗಳು, ಅರಣ್ಯವಾಸಿಗಳು, ದ್ವೀಪಗಳು ಮತ್ತು ನದಿಗಳ ಬಳಿ ವಾಸಿಸುವವರು. (ಫಲಾನುಭವಿಗಳು ಸಂಬಂಧಿತ ದಾಖಲೆಗಳನ್ನು ಸಲ್ಲಿಸಬೇಕು)
  • ಆಕೆ ಮೇಲಿನ 2 ವರ್ಗಗಳಲ್ಲಿ ಬರದಿದ್ದರೆ, 14-ಪಾಯಿಂಟ್ ಘೋಷಣೆಯನ್ನು ಸಲ್ಲಿಸುವ ಮೂಲಕ ಬಡ ಕುಟುಂಬದ ಅಡಿಯಲ್ಲಿ ಫಲಾನುಭವಿ ಎಂದು ತನ್ನ ಹಕ್ಕು ಸಾಧಿಸಬಹುದು (ನಿಗದಿತ ಫಾರ್ಮಾಟ್‌ನ ಪ್ರಕಾರ)

ಅರ್ಜಿದಾರರು ಈ ಕೆಳಗಿನ ದಾಖಲೆಗಳನ್ನು ಒದಗಿಸಬೇಕು:

  • ನಿಗದಿತ ಫಾರ್ಮಾಟ್‌ ಮತ್ತು ಸರಿಯಾಗಿ ಸಹಿ ಮಾಡಲಾದ ಅರ್ಜಿದಾರರ ಛಾಯಾಚಿತ್ರವನ್ನು ಹೊಂದಿರುವ KYC.
  • POI (ಗುರುತಿನ ಪುರಾವೆ)
  • POA (ವಿಳಾಸದ ಪುರಾವೆ)
  • ಅರ್ಜಿದಾರರ ಆಧಾರ್ ಪ್ರತಿ,
  • ರೇಷನ್ ಕಾರ್ಡ್ ಅಥವಾ ಸಂಬಂಧಿತ ದಾಖಲೆಯಲ್ಲಿ ನಮೂದಿತ ಕುಟುಂಬದ ಎಲ್ಲಾ ವಯಸ್ಕ ಸದಸ್ಯರ ಆಧಾರ್ ಪ್ರತಿ.
  • ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು
  • ಪಡಿತರ ಚೀಟಿ ಅಥವಾ ರಾಜ್ಯ ಸರ್ಕಾರ ನೀಡಿದ ಯಾವುದೇ ಕುಟುಂಬದ ದಾಖಲೆ. / ಜಿಲ್ಲಾಡಳಿತದಿಂದ ಅಂಗೀಕೃತವಾದ ಮತ್ತು ಅದರಲ್ಲಿ ಆಕೆಯ ಹೆಸರಿರುವಂತಹ ದಾಖಲೆ(ಉದಾಹರಣೆಗೆ ರಾಜಸ್ಥಾನದಲ್ಲಿ ಭಾಮಾಶಾ ಕಾರ್ಡ್ ಮತ್ತು ಎಂಪಿಯಲ್ಲಿ ಸಮಗ್ರ ಐಡಿ, ಉತ್ತರ ಪ್ರದೇಶದ ಪರಿವಾರ್ ರಿಜಿಸ್ಟರ್, ಹರಿಯಾಣದ ಪರಿವಾರ್ ಪೆಹಚಾನ್ ಪತ್ರ, ಆಂಧ್ರ ಪ್ರದೇಶದ ರೈಸ್ ಕಾರ್ಡ್ ಅಥವಾ ಯಾವುದೇ ಇತರ ರಾಜ್ಯಗಳಿಂದ ನಂತರ ಸೇರಿಸಲಾದ ಕಾರ್ಡ್‌ಗಳು) . ರಾಜ್ಯಗಳಲ್ಲಿ, ರಾಜ್ಯ ಸರ್ಕಾರದ ಪೋರ್ಟಲ್ ನಲ್ಲಿ ಕುಟುಂಬದ ವಿವರಗಳನ್ನು ನವೀಕರಿಸಲಾಗಿದ್ದಲ್ಲಿ, ಈ ಪೋರ್ಟಲ್‌ನಿಂದ ಪ್ರಿಂಟ್‌ಔಟ್‌ ತೆಗೆದು ಸ್ವಯಂ ಸಹಿ ಮಾಡಿದ ಪ್ರತಿಯನ್ನು ಪಡಿತರ ಚೀಟಿಗೆ ಬದಲಾಗಿ ಫಲಾನುಭವಿಯು ಸಲ್ಲಿಸಬಹುದು.
  • ವಲಸೆ ಅರ್ಜಿದಾರರು ಕುಟುಂಬದ ಸಂಯೋಜನೆಯನ್ನು ಖಾತ್ರಿಪಡಿಸಲು ಪಡಿತರ ಚೀಟಿಗೆ ಬದಲಾಗಿ ಅನುಬಂಧ-I ರ ಪ್ರಕಾರ ಮಾಡಿದ ಸ್ವಯಂ ಘೋಷಣೆಯನ್ನು ಸಲ್ಲಿಸಬಹುದು.
  • ಈ ಏಳು ವರ್ಗಗಳ ಅಡಿಯಲ್ಲಿ ಅಡಿಯಲ್ಲಿ ಕನೆಕ್ಷನ್‌ಗೆ ಅನ್ವಯಿಸಿದ್ದಲ್ಲಿ ಪೋಷಕ ದಾಖಲೆಗಳನ್ನು ಒದಗಿಸಬೇಕು , (ಅಂದರೆ SC/ST ಕುಟುಂಬಗಳು, ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳು (PMAY) (ಗ್ರಾಮೀಣ), ಅಂತ್ಯೋದಯ ಅನ್ನ ಯೋಜನೆ (AAY), ಅರಣ್ಯವಾಸಿಗಳು, ಅತ್ಯಂತ ಹಿಂದುಳಿದ ವರ್ಗಗಳು (MBC), ಟೀ ಮತ್ತು ಎಕ್ಸ್-ಟೀ ಗಾರ್ಡನ್ ಬುಡಕಟ್ಟುಗಳು, ನದಿ ದ್ವೀಪಗಳಲ್ಲಿ ವಾಸಿಸುವ ಜನರು)
  • ನಿಗದಿತ ಫಾರ್ಮ್ಯಾಟ್‌ ನಲ್ಲಿಅರ್ಜಿದಾರರಿಂದ ಸರಿಯಾಗಿ ಸಹಿ ಮಾಡಿಸಿದ ಬಡ ಕುಟುಂಬದ ಬೆಂಬಲಕ್ಕಾಗಿ ಇರುವ 14-ಪಾಯಿಂಟ್‌ ಘೋಷಣೆಯನ್ನು ಸ್ವೀಕರಿಸಬಹುದು.

ಒಂದು ವೇಳೆ ಆಧಾರ್ ಕಾರ್ಡ್ ಕನೆಕ್ಷನ್ ಬಿಡುಗಡೆ ಮಾಡಬೇಕಾದ ವಿಳಾಸವನ್ನೇ ಹೊಂದಿದ್ದರೆ, ಅದನ್ನು PoI ಮತ್ತು PoA ಎರಡನ್ನೂ ಆಗಿ ಬಳಸಬಹುದು.

  • ಅಸ್ಸಾಂ ಮತ್ತು ಮೇಘಾಲಯ ಹೊರತುಪಡಿಸಿ ಎಲ್ಲಾ ರಾಜ್ಯಗಳ ಅರ್ಜಿದಾರರಿಗೆ ಅರ್ಜಿದಾರರ ಆಧಾರ್ ಕಾರ್ಡ್ ಅನ್ನು ಗುರುತಿನ ಪುರಾವೆಯಾಗಿ (POI) ಮಾತ್ರ ಪರಿಗಣಿಸಲಾಗುತ್ತದೆ.
  • ಅರ್ಜಿದಾರರ ಪ್ರಸ್ತುತ ವಿಳಾಸವು ಆಕೆಯ ಆಧಾರ್‌ ವಿಳಾಸವೇ ಇಗಿದ್ದಲ್ಲಿ ಇದನ್ನು ವಿಳಾಸದ ಪುರಾವೆಯಾಗಿಯೂ(POA) ಪರಿಗಣಿಸಲಾಗುತ್ತದೆ.
  • ಒಂದು ವೇಳೆ, ಅರ್ಜಿದಾರರ ವಿಳಾಸವು ಆಧಾರ್ ಕಾರ್ಡ್‌ನಲ್ಲಿ ನಮೂದಿಸಿರುವುದಕ್ಕಿಂತ ಭಿನ್ನವಾಗಿದ್ದರೆ, ಅವರು POAಗಾಗಿ ಅನುಬಂಧ - A ನಲ್ಲಿ ಪಟ್ಟಿ ಮಾಡಲಾದ ಯಾವುದೇ ಇತರ ದಾಖಲೆಗಳನ್ನು ಸಲ್ಲಿಸಬಹುದು
  • ಅಸ್ಸಾಂ ಮತ್ತು ಮೇಘಾಲಯಕ್ಕೆ, ಆಧಾರ್ ಕಡ್ಡಾಯವಿಲ್ಲದಿರುವುದರಿಂದ, ಅರ್ಜಿದಾರರು ಕೆಳಗಿನ ಕೋಷ್ಟಕದಲ್ಲಿ ನೀಡಿರುವ ಯಾವುದೇ ಗುರುತಿನ ಪುರಾವೆಯನ್ನು ಸಲ್ಲಿಸಬಹುದು.
  • ವಲಸಿಗರು ಅನುಬಂಧ - I ರ ಪ್ರಕಾರ ಸ್ವಯಂ-ಘೋಷಣೆ ನಮೂನೆಯನ್ನು ಒಳಗೊಂಡಂತೆ PoA ಪಟ್ಟಿಯ ಅಡಿಯಲ್ಲಿ ಕೆಳಗೆ ನಮೂದಿಸಲಾದ 25 ದಾಖಲೆಗಳಲ್ಲಿ ಯಾವುದನ್ನಾದರೂ ಸಲ್ಲಿಸಬಹುದು.
  • ಅನುಬಂಧದ ಪ್ರಕಾರ ಸ್ವಯಂ-ಘೋಷಣೆ ನಮೂನೆ - ವಲಸಿಗರಲ್ಲದವರಿಗೆ ಅನ್ವಯವಾಗುವುದಿಲ್ಲ.

ಅರ್ಜಿದಾರರು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

  • ಆನ್‌ಲೈನ್ - ಗ್ರಾಹಕರು ಆನ್‌ಲೈನ್ ಅಪ್ಲಿಕೇಶನ್ ಮೂಲಕ ನೋಂದಾಯಿಸಿಕೊಳ್ಳಬಹುದು ಅಥವಾ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಅವರು ತಮ್ಮ ಹತ್ತಿರದ ಸಿಎಸ್‌ಸಿ ಕೇಂದ್ರವನ್ನು ಸಹ ಸಂಪರ್ಕಿಸಬಹುದು
  • ಆಫ್‌ಲೈನ್ - ಗ್ರಾಹಕರು ನೇರವಾಗಿ ಅರ್ಜಿಯನ್ನು ವಿತರಕರಲ್ಲಿ ಸಲ್ಲಿಸುವ ಮೂಲಕ ನೋಂದಾಯಿಸಿಕೊಳ್ಳಬಹುದು.

ಕೆಳಗಿನ ದಾಖಲೆಗಳನ್ನು ವಿತರಕರು ಅಪ್‌ಲೋಡ್ ಮಾಡಬೇಕು:

  • ಗುರುತಿನ ಪುರಾವೆ (ಪಿಒಐ (ಅರ್ಜಿ ನಮೂನೆ ಪಟ್ಟಿಯಲ್ಲಿನ ಯಾವುದಾದರೂ ಒಂದು)
  • ವಿಳಾಸದ ಪುರಾವೆ (POA) (ಅರ್ಜಿ ನಮೂನೆ ಪಟ್ಟಿಯಲ್ಲಿನ ಯಾವುದಾದರೂ ಒಂದು)
  • ಅರ್ಜಿದಾರರ ಆಧಾರ್ (ಅಸ್ಸಾಂ ಮತ್ತು ಮೇಘಾಲಯಕ್ಕೆ ಆಧಾರ್ ಕಡ್ಡಾಯವಲ್ಲ, ಆದರೆ ರಾಜ್ಯ ಸರ್ಕಾರದಿಂದ ನೀಡಲಾದ ರೇಷನ್ ಕಾರ್ಡ್ ಅಗತ್ಯವಿದೆ).
  • ಪಡಿತರ ಚೀಟಿ ಅಥವಾ ರಾಜ್ಯ ಸರ್ಕಾರ ನೀಡಿದ ಯಾವುದೇ ಕುಟುಂಬದ ದಾಖಲೆ. / ವಲಸಿಗರಿಗೆ ಜಿಲ್ಲಾಡಳಿತ ಅನುಮೋದಿಸಿರುವ ಅನುಬಂಧ-I ರ ಪ್ರಕಾರ ಕುಟುಂಬದ ಸಂಯೋಜನೆ ಅಥವಾ ಕುಟುಂಬದ ಸ್ವಯಂ ಘೋಷಣೆಯ ದಾಖಲೆ
  • ನಿರ್ದಿಷ್ಟ ಫಾರ್ಮ್ಯಾಟ್‌ನ ಅರ್ಜಿದಾರರಿಂದ ಸರಿಯಾಗಿ ಸಹಿ ಮಾಡಲಾದ 14-ಪಾಯಿಂಟ್ ಘೋಷಣೆ.
  • ಪ್ರಶ್ನೆ (1) (ಬಿ) ಉಲ್ಲೇಖಿಸಿದ ಯಾವುದೇ ಏಳು ವರ್ಗಗಳ ಅಡಿಯಲ್ಲಿ ಕನೆಕ್ಷನ್‌ಗೆ ಅನ್ವಯಿಸಲಾದ ಸಂದರ್ಭದಲ್ಲಿ ಪೋಷಕ ದಾಖಲೆ.

ವಿತರಕರಿಂದ OMC ಪೋರ್ಟಲ್‌ನಲ್ಲಿ ಸಂಗ್ರಹಿಸಲು ಮತ್ತು ದೃಢೀಕರಿಸಲು ಬೇಕಾಗುವ ಡಾಕ್ಯುಮೆಂಟ್ ಗಳು.

  • OMC ಪೋರ್ಟಲ್‌ನಲ್ಲಿ ಅಸ್ತಿತ್ವದಲ್ಲಿರುವ KYC ಗಳನ್ನು ಉಜ್ವಲ 2.0 ಕಂಪ್ಲೈಂಟ್ ಆಗಿ ಸಕ್ರಿಯಗೊಳಿಸಲು ಗ್ರಾಹಕರಿಂದ ಘೋಷಣೆ. (ಹಿಂದಿನ ಯೋಜನೆಯಡಿಯಲ್ಲಿ ತೆರವುಗೊಳಿಸಲಾದ KYC ಗಳು - PMUY/EPMUY/EPMUY2 ಅನ್ನು ಉಜ್ವಲ 2.0 ಯೋಜನೆಯಡಿಯಲ್ಲಿ ಅರ್ಹತೆಗಾಗಿ ಪರಿಶೀಲಿಸಲಾಗುತ್ತದೆ. ಈ ಅರ್ಜಿದಾರರು ಗ್ರಾಹಕರಿಂದ ಸ್ವಯಂ-ಘೋಷಣೆಯನ್ನು ಸಲ್ಲಿಸಬೇಕು)
  • ಗ್ರಾಹಕರ ಆವರಣದ/ಮನೆಯ ಪೂರ್ವ-ಸ್ಥಾಪನೆ ಪರಿಶೀಲನೆ ವರದಿ

ಅಂತಹ ಫಲಾನುಭವಿಗಳನ್ನು ನೋಂದಾಯಿಸಲಾಗುವುದಿಲ್ಲ. ಕುಟುಂಬದಲ್ಲಿ ಅಂತಹ ವಯಸ್ಕ ಸದಸ್ಯರ ಆಧಾರ್ ನೋಂದಣಿಯನ್ನು ಮಾಡಿಸಲು ವಿತರಕರು ಪ್ರಯತ್ನಿಸಬೇಕು ಮತ್ತು ಅದರ ರಸೀದಿಯನ್ನು ತೋರಿಸಬೇಕು, ಅರ್ಜಿದಾರರು ಉಜ್ಜ್ವಾಲಾ 2.0 ಅಡಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಯಾವುದೇ ಕುಟುಂಬದ ವಯಸ್ಕ ಸದಸ್ಯರ ಮರಣದ ಸಂದರ್ಭದಲ್ಲಿ ಅಥವಾ ಮದುವೆಯ ಕಾರಣದಿಂದ ಯಾವುದೇ ಕುಟುಂಬದ ಸದಸ್ಯರು ಪ್ರತ್ಯೇಕತೆವಾದಾಗ ಮಾತ್ರ ವಿನಾಯಿತಿ ನೀಡಲಾಗುತ್ತದೆ, ಮರಣ ಪ್ರಮಾಣಪತ್ರ, ಮದುವೆ ಪ್ರಮಾಣಪತ್ರ ಇತ್ಯಾದಿ ಸಾಕ್ಷ್ಯಚಿತ್ರ ಪುರಾವೆಗಳನ್ನು ಸಲ್ಲಿಸಲಾಗುತ್ತದೆ.

ಅರ್ಜಿದಾರರು ಸಲ್ಲಿಸಿದ 14 ಅಂಶಗಳ ಘೋಷಣೆಯು ಉಜ್ವಲ 2.0 ಅಡಿಯಲ್ಲಿ ಅರ್ಹ ಬಡ ಕುಟುಂಬ ಎಂದು ಪರಿಗಣಿಸಲು ಮೂಲಭೂತ ಮಾನದಂಡವಾಗಿದೆ. ಹೀಗಾಗಿ, ಎಲ್ಲಾ ಅರ್ಜಿದಾರರಿಗೆ ಇದು ಕಡ್ಡಾಯವಾಗಿದೆ.

ಪಡಿತರ ಚೀಟಿಯು ಫಲಾನುಭವಿಯ ಕುಟುಂಬದ ಸಂಯೋಜನೆಯನ್ನು ಗುರುತಿಸುವ ಉದ್ದೇಶಕ್ಕಾಗಿ ಮಾತ್ರವಾಗಿರುವುದರಿಂದ ಯಾವುದೇ ರೀತಿಯ ಪಡಿತರ ಚೀಟಿಯನ್ನು ಎಪಿಎಲ್ ಅಥವಾ ಬಿಪಿಎಲ್ ಅನ್ನು ಪರಿಗಣಿಸಲಾಗುತ್ತದೆ.

ಹೌದು, ಕುಟುಂಬದಲ್ಲಿ ಒಬ್ಬ ವಯಸ್ಕ ಸದಸ್ಯರನ್ನು ದೃಢೀಕರಿಸುವ ದಾಖಲೆಗಳು ಅಂದರೆ ಪಡಿತರ ಚೀಟಿ ಇದ್ದರೆ. ಪಡಿತರ ಚೀಟಿಯಲ್ಲಿ ಹೆಚ್ಚುವರಿ ವಯಸ್ಕ ಸದಸ್ಯರನ್ನು ತೋರಿಸಿದರೆ, ಕುಟುಂಬದ ಮೃತ ಸದಸ್ಯರ ಮರಣ ಪ್ರಮಾಣ ಪತ್ರ ಅಥವಾ ಕುಟುಂಬದಿಂದ ಹೊರಗೆ ಹೋದ ಸದಸ್ಯರ ವಿವಾಹ ಪ್ರಮಾಣಪತ್ರವನ್ನು ಲಗತ್ತಿಸಬೇಕು.

ಇಲ್ಲ. PMUY ಕನೆಕ್ಷನ್‌ನ್ನು ಬಡ ಕುಟುಂಬದ ವಯಸ್ಕ ಮಹಿಳಾ ಸದಸ್ಯರ ಹೆಸರಿನಲ್ಲಿ ಮಾತ್ರ ಬಿಡುಗಡೆ ಮಾಡಬಹುದು.

ಹೌದು. ಉಜ್ವಲ 2.0 ಅಡಿಯಲ್ಲಿ ನೋಂದಾಯಿಸಲಾದ ಸಂಪರ್ಕಗಳಿಗೆ ಬಯೋಮೆಟ್ರಿಕ್ ಅಥವಾ ಮೊಬೈಲ್ OTP ಆಧಾರಿತ ಆಧಾರ್ ದೃಢೀಕರಣವನ್ನು ಮಾಡಲಾಗುತ್ತದೆ. ಅಸ್ಸಾಂ ಮತ್ತು ಮೇಘಾಲಯ ರಾಜ್ಯದಲ್ಲಿ ಮಾತ್ರ ಆಧಾರ್ ದೃಢೀಕರಣವು ಐಚ್ಛಿಕವಾಗಿರುತ್ತದೆ.

ಹೌದು, ಅರ್ಜಿದಾರರು ಉಜ್ವಲ 2.0 ಮಾರ್ಗಸೂಚಿಗಳ ಪ್ರಕಾರ ಯಾವುದೇ ಇತರ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಅವರಿಗೆ ಸಂಪರ್ಕವನ್ನು ನೀಡಬಹುದು.

ಆದಾಗ್ಯೂ, SC ಅಥವಾ ST ಕನೆಕ್ಷನ್‌ನ ಅರ್ಜಿಯನ್ನು ಅರ್ಜಿದಾರರು ಸಲ್ಲಿಸಿದ ಪೋಷಕ ದಾಖಲೆಯ ಆಧಾರದ ಮೇಲೆ ಮಾತ್ರ ನಿರ್ಧರಿಸಲಾಗುತ್ತದೆ.

ಹೌದು, ಅರ್ಜಿದಾರರು ಉಜ್ವಲ 2.0 ಮಾರ್ಗಸೂಚಿಗಳ ಪ್ರಕಾರ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು ಅಂದರೆ ಕುಟುಂಬದ ಎಲ್ಲಾ ವಯಸ್ಕ ಸದಸ್ಯರ ಆಧಾರ್‌ನ್ನು ಮತ್ತು ಮೇಲಿನ ಪ್ರಶ್ನೆ (6) ರಲ್ಲಿ ನೀಡಿರುವ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಹೌದು, ಅರ್ಜಿದಾರರು ಸಲ್ಲಿಸಿದ ಎಲ್ಲಾ ಹಿಂದಿನ ಅರ್ಜಿಗಳು ಅರ್ಹತಾ ಮಾನದಂಡಗಳನ್ನು ಪೂರೈಸುವ ಅಗತ್ಯವಿದೆ ಮತ್ತು PMUY ಅಡಿಯಲ್ಲಿ ಅರ್ಜಿಯ ಮುಂದುವರಿಕೆಗಾಗಿ ಸ್ವಯಂ ಘೋಷಣೆಯೊಂದಿಗೆ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ಹೊಸ ಕುಟುಂಬದ ಸದಸ್ಯರನ್ನು ಸೇರಿಸಿದರೆ KYC ಮತ್ತೊಮ್ಮೆ OMC ಡಿಡ್ಯೂಪ್ಲಿಕೇಶನ್‌ಗೆ ಹೋಗುತ್ತದೆ.

ಈ ಮೊದಲೇ ಸೀಡ್‌ ಆಗಿರುವ ಕೆವೈಸಿಗಳಿದ್ದು ಮತ್ತು ಅವು ಈಗಾಗಲೇ ಪಡಿತರ ಚೀಟಿಯಲ್ಲಿ ಕಡಿತಗೊಂಡಿದ್ದರೆ ಅಂತಹ ಸಂದರ್ಭದಲ್ಲಿ, ಪಡಿತರ ಚೀಟಿಯ ಬದಲಾವಣೆಯನ್ನು ಅನುಮತಿಸಲಾಗುವುದಿಲ್ಲ. ಗ್ರಾಹಕರು ಹೊಸ KYC ಅನ್ನು ಸಲ್ಲಿಸಬೇಕಾಗುತ್ತದೆ.

ಹೌದು, ಕುಟುಂಬದ ವಯಸ್ಕ ಸದಸ್ಯರನ್ನು KYC ದಿನಾಂಕದಂದು ಪಡಿತರ ಚೀಟಿಯಲ್ಲಿನ ವಯಸ್ಸಿನ ಆಧಾರದ ಖಚಿತಗೊಳಿಸಿಕೊಳ್ಳಲಾಗುತ್ತದೆ ಮತ್ತು ಅರ್ಜಿದಾರರಿಂದ ಸಂಗ್ರಹಿಸಬೇಕಾದ ಕುಟುಂಬದ ಎಲ್ಲಾ ವಯಸ್ಕ ಸದಸ್ಯರ ಆಧಾರ್ ವಿವರಗಳನ್ನು ಪರಿಶೀಲಿಸಲಾಗುತ್ತದೆ.

ಈ ಸಂದರ್ಭದಲ್ಲಿ, ಅರ್ಜಿದಾರ ಮತ್ತು ವಿತರಕರಿಂದ ಪಡೆದ ಕುಟುಂಬದ ಸದಸ್ಯರ ವಿವರಗಳು ಮತ್ತು ಅವರ ವಯಸ್ಸಿನ ಸ್ವಯಂ-ಘೋಷಣೆಯನ್ನು ಕುಟುಂಬದ ಸದಸ್ಯರ ಆಧಾರ್ ವಿವರಗಳೊಂದಿಗೆ ಪರಿಶೀಲಿಸಲಾಗುತ್ತದೆ. ಈ ಘೋಷಣೆಯನ್ನು ಅರ್ಜಿದಾರರ ಪಡಿತರ ಚೀಟಿಯೊಂದಿಗೆ ಅಪ್‌ಲೋಡ್ ಮಾಡಬೇಕಾಗುತ್ತದೆ. ಇದಲ್ಲದೆ, ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಸದಸ್ಯರ ಆಧಾರ್‌ನ ವಿವರಗಳನ್ನು KYC ಯಲ್ಲಿ ಸಲ್ಲಿಸಬೇಕು.

  • "ಪ್ರಶ್ನೆ (2) ನಲ್ಲಿ ಪಟ್ಟಿ ಮಾಡಲಾದ ದಾಖಲೆಗಳ ಸಲ್ಲಿಕೆ ಆಧಾರದ ಮೇಲೆ ಉಜ್ವಲ 2.0 ಕನೆಕ್ಷನ್‌ನ ಅರ್ಹತಾ ಮಾನದಂಡಗಳನ್ನು KYC ಪೂರೈಸಲು ಒಳಪಟ್ಟು ವಲಸೆ ಹೋದ ಹೊಸ ಸ್ಥಳಕ್ಕೆ PMUY ಕನೆಕ್ಷನ್‌ನ್ನು ಬಿಡುಗಡೆ ಮಾಡಬಹುದು. ಸಂಪರ್ಕವನ್ನು ವಯಸ್ಕ ಸ್ತ್ರೀ ಹೆಸರಿನಲ್ಲಿ ಬಿಡುಗಡೆ ಮಾಡಲಾಗುತ್ತದೆ
  • PMUY ಅಡಿಯಲ್ಲಿ ಬಿಡುಗಡೆಯಾದ 14.2 ಕೆಜಿಯ 12 ಸಿಲಿಂಡರ್‌ಗಳು (170.4 ಕೆಜಿ) ಸಬ್ಸಿಡಿ ಪಡೆಯಲು ಅರ್ಹವಾಗಿರುತ್ತದೆ.

ಇಲ್ಲ. ಅರ್ಜಿದಾರರು (ಅತ್ತೆ-ಮಾವ) ಈಗಾಗಲೇ ಸಂಪರ್ಕವನ್ನು ಹೊಂದಿರುವುದರಿಂದ ಅವರ ಹೆಸರಿನಲ್ಲಿ ಮತ್ತೊಂದು ಸಂಪರ್ಕವನ್ನು ಬಿಡುಗಡೆ ಮಾಡಲಾಗುವುದಿಲ್ಲ, ಆದರೆ ಸಂಪರ್ಕವನ್ನು ನಗರಕ್ಕೆ ವರ್ಗಾಯಿಸಬಹುದು ಮತ್ತು ವಿಳಾಸ ಬದಲಾವಣೆಯ ಸೌಲಭ್ಯವನ್ನು ಶೀಘ್ರದಲ್ಲೇ ಲಭ್ಯಗೊಳಿಸಲಾಗುವುದು.

ಹೌದು. PMUY ಸಂಪರ್ಕವನ್ನು ಬಿಡುಗಡೆ ಮಾಡುವ ಮೊದಲು, ಸ್ಟ್ಯಾಂಡರ್ಡ್ ಫಾರ್ಮ್ಯಾಟ್ ಪ್ರಕಾರ ಅರ್ಜಿದಾರರ ಮನೆಯಲ್ಲಿ ಪೂರ್ವ-ಸ್ಥಾಪನಾ ತಪಾಸಣೆಯನ್ನು ಕೈಗೊಳ್ಳಲಾಗುತ್ತದೆ. OMC ಯ ಮೊಬೈಲ್ ಅಪ್ಲಿಕೇಶನ್ ಮೂಲಕ ಗ್ರಾಹಕರ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು OTP ಪರಿಶೀಲನೆಯ ಮೂಲಕ ಅಥವಾ ಗ್ರಾಹಕರು ಮತ್ತು ವಿತರಕರು ಸಹಿ ಮಾಡಿದ ಫಾರ್ಮ್ಯಾಟ್‌ನ್ನು ತಪಾಸಣೆ ಮಾಡುವ ಮೂಲಕ ಇದನ್ನು ದೃಢೀಕರಿಸಲಾಗುತ್ತದೆ.

ಹೌದು, ಇದು ಏಕೈಕ ವಯಸ್ಕ ಮಹಿಳಾ ಸದಸ್ಯರಿಗೆ ಅನ್ವಯಿಸುತ್ತದೆ, ಈ ಸಂದರ್ಭ, ಪ್ರಶ್ನೆ (2)ರಲ್ಲಿ ಒದಗಿಸಲಾದ ಎಲ್ಲಾ ಮಾನದಂಡಗಳನ್ನು ಪೂರೈಸುತ್ತದೆ.

ಅರ್ಜಿದಾರರು 14.2 ಕೆಜಿ ಸಿಂಗಲ್ ಸಿಲಿಂಡರ್ ಅಥವಾ 5 ಕೆಜಿ ಸಿಂಗಲ್ ಸಿಲಿಂಡರ್ ಅಥವಾ 5 ಕೆಜಿ ಡಬಲ್ ಸಿಲಿಂಡರ್ ಕನೆಕ್ಷನ್‌ನ್ನು ಆಯ್ಕೆ ಮಾಡಬಹುದು.

ಹೌದು, ಉಜ್ವಲ 2.0 ಅಡಿಯಲ್ಲಿ, OMC ಗಳು ಗ್ರಾಹಕರಿಗೆ ಉಚಿತವಾಗಿ LPG ಸ್ಟೌವ್ ಮತ್ತು ಫಸ್ಟ್ ರೀಫಿಲ್ ಅನ್ನು ಒದಗಿಸುತ್ತವೆ. ಆದ್ದರಿಂದ, ಉಜ್ವಲ 2.0 ಅಡಿಯಲ್ಲಿ LPG ಕನೆಕ್ಷನ್ ತೆಗೆದುಕೊಳ್ಳುವಾಗ ಗ್ರಾಹಕರು ಏ‌ನನ್ನೂ ಪಾವತಿಸಬೇಕಾಗಿಲ್ಲ.

ಅಂತಹ ಸಂದರ್ಭಗಳಪಶ್ಚಿಮ ಬಂಗಾಳ ರಾಜ್ಯವು ನೀಡಿದ ಪಡಿತರ ಚೀಟಿಯಲ್ಲಿ ಕುಟುಂಬದ ಎಲ್ಲಾ ಸದಸ್ಯರ ಪಟ್ಟಿ ಇಲ್ಲ. ಮಹಿಳಾ ಆರ್‌ಸಿ ಹೊಂದಿರುವವರು ಮದುವೆಯ ನಂತರವೂ ಆರ್‌ಸಿಯಲ್ಲಿ ತಮ್ಮ ತಂದೆಯ ಹೆಸರನ್ನು ಹೊಂದಿದ್ದಾರೆ. ಅಂತಹ ಸಂದರ್ಭಗಳಲ್ಲಿ ಕುಟುಂಬದ ಸದಸ್ಯರ ಆಧಾರ್ ಸೀಡಿಂಗ್‌ಗಾಗಿ ಕುಟುಂಬದ ಸಂಯೋಜನೆಯನ್ನು ಹೇಗೆ ಸ್ಥಾಪಿಸಬೇಕು?ಲ್ಲಿ, ಅರ್ಜಿದಾರರು KYC ವಿವರಗಳಲ್ಲಿ ಎಲ್ಲಾ ವಯಸ್ಕ ಕುಟುಂಬದ ಸದಸ್ಯರನ್ನು ಘೋಷಿಸಬೇಕು

ಕುಟುಂಬವು ವಿಭಜನೆಯಾಗಿದ್ದರೆ ಮತ್ತು ಹಿಂದಿನ ಸಂಪರ್ಕದೊಂದಿಗೆ ಕುಟುಂಬ ಸದಸ್ಯರ ಆಧಾರ್ ಲಿಂಕ್ ಆಗಿದ್ದರೆ, ಅರ್ಜಿದಾರರು ಹೊಸ ಪಡಿತರ ಚೀಟಿಯನ್ನು ಸಲ್ಲಿಸುವ ಮೂಲಕ ಅಸ್ತಿತ್ವದಲ್ಲಿರುವ ಎಲ್‌ಪಿಜಿ ಸಂಪರ್ಕದಿಂದ ತಮ್ಮ ಆಧಾರ್ ಸಂಖ್ಯೆಗಳನ್ನು ಡಿ-ಸೀಡ್ ಮಾಡಲು ಸಂಬಂಧಿಸಿದ ವಿತರಕರು / ಒಎಂಸಿಯನ್ನು ಸಂಪರ್ಕಿಸಬೇಕಾಗುತ್ತದೆ. ಅದರ ನಂತರ, ಅರ್ಜಿದಾರರು ಪ್ರಶ್ನೆ(6) ನಲ್ಲಿ ನಮೂದಿಸಲಾದ ಎಲ್ಲಾ ದಾಖಲೆಗಳನ್ನು ಸಲ್ಲಿಸಬಹುದು.

ಆರ್‌ಸಿ ಪ್ರಕಾರ ಒಂದೇ ಕುಟುಂಬದ ಮುಖ್ಯಸ್ಥರನ್ನು (HOF) ಹೊಂದಿರುವ ಕುಟುಂಬಗಳ ಸಂದರ್ಭಗಳಲ್ಲಿ(2 ಸಹೋದರರನ್ನು ಹೊಂದಿರುವ ಕುಟುಂಬ) ಮಾವ, ಅತ್ತೆ ಅಥವಾ ಕುಟುಂಬದ ಮುಖ್ಯಸ್ಥನ ಆಧಾರ್ ಅನ್ನು ಸಲ್ಲಿಸದಿದ್ದರೂ ಸಹ ಸಂಪರ್ಕಗಳನ್ನು ಬಿಡುಗಡೆ ಮಾಡಲು ಅನುಮತಿಸಲಾಗುತ್ತದೆ. ಆದಾಗ್ಯೂ, ಅಂತಹ ಸಂದರ್ಭದಲ್ಲಿ, ಅರ್ಜಿದಾರರು KYCಯಲ್ಲಿ ತಮ್ಮ ಕುಟುಂಬದ ಸಂಯೋಜನೆಯನ್ನು ವಿವರಿಸುವ ಎಲ್ಲಾ ವಯಸ್ಕ ಸದಸ್ಯರನ್ನು ಘೋಷಿಸಬೇಕು ಮತ್ತು ಅವರ ಆಧಾರ್ ಜೊತೆಗೆ ಕುಟುಂಬದ ಎಲ್ಲಾ ವಯಸ್ಕ ಸದಸ್ಯರ ಆಧಾರ್ ವಿವರಗಳನ್ನು ಸಲ್ಲಿಸಬೇಕು.