ಆನ್‌ ಲಾಯಿನ್‌ ಹೊಸ ಎಲ್‌ಪಿಜಿ ಕನೆಕ್ಷನ್‌

ಹೊಸ LPG ಸಂಪರ್ಕಗಳು ಈಗ ದೇಶಾದ್ಯಂತ ಬೇಡಿಕೆಗೆ ಅನುಗುಣವಾಗಿ ಲಭ್ಯವಿವೆ. ನಿಮ್ಮ ಮನೆಯಲ್ಲಿ ಯಾವುದೇ PSU ತೈಲ ಕಂಪನಿಗಳಿಂದ ನೀವು LPG ಕನೆಕ್ಷನ್‌ನ್ನು ಹೊಂದಿಲ್ಲದಿದ್ದರೆ ಮತ್ತು ನಿಮ್ಮ ಮನೆಯಲ್ಲಿ ನೀವು ಪ್ರತ್ಯೇಕ ಅಡುಗೆ ಮನೆ ಹೊಂದಿದ್ದರೆ, ನಿಮ್ಮ ಮನೆಯಲ್ಲಿ ನೀವು ಡೊಮೆಸ್ಟಿಕ್‌ ಕನೆಕ್ಷನ್ ಪಡೆಯಬಹುದು. ಡೊಮೆಸ್ಡಿಕ್ ಕನೆಕ್ಷನ್‌ಗಾಗಿ, ನಿಮ್ಮ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಹತ್ತಿರದ ವಿತರಕರನ್ನು ನೀವು ಭೇಟಿ ಮಾಡಬಹುದು ಮತ್ತು ಕನೆಕ್ಷನ್‌ ಬೇಕಾದ ಮನೆಯ ಗುರುತು ಮತ್ತು ವಿಳಾಸದ ಮಾನ್ಯ ಪುರಾವೆಯೊಂದಿಗೆ ಸಂಪರ್ಕಕ್ಕಾಗಿ ನೋಂದಾಯಿಸಿಕೊಳ್ಳಬಹುದು.

ಈಗ, ನೀವು ಹೊಸ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬಹುದು ಮೊಬೈಲ್ ಅಪ್ಲಿಕೇಶನ್ Following apps of oil marketing companies can be used to apply for an LPG connection online. ಮತ್ತು ಪೋರ್ಟಲ್ Following websites of oil marketing companies can be used to apply for an LPG connection online. also.

"ನಿವಾಸದ ಪುರಾವೆಗಾಗಿ ಈ ಕೆಳಗಿನ ದಾಖಲೆಗಳಲ್ಲಿ ಒಂದನ್ನು ಸಲ್ಲಿಸಬಹುದು: - "

  1. ಆಧಾರ್‌ (ಯುಐಡಿ)
  2. ಡ್ರೈವಿಂಗ್‌ ಲೈಸೆನ್ಸ್/‌ ಚಾಲನಾ ಪರವಾನಗಿ
  3. ಲೀಸ್/ ಬಾಡಿಗೆ ಒಪ್ಪಂದ
  4. ವೋಟರ್‌ ಐಡಿ
  5. ರೇಶನ್‌ ಕಾರ್ಡ್
  6. ದೂರವಾಣಿ / ವಿದ್ಯುತ್ / ನೀರಿನ ಬಿಲ್
  7. ಪಾಸ್‌ ಪೋರ್ಟ್‌
  8. ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿದ ಸ್ವಯಂ ಘೋಷಣೆ
  9. ಫ್ಲಾಟ್ ಹಂಚಿಕೆ / ಸ್ವಾಧೀನ ಪತ್ರ
  10. ಮನೆ ನೋಂದಣಿ ದಾಖಲೆ
  11. ಎಲ್‌ಐಸಿ ಪಾಲಿಸಿ
  12. ಬ್ಯಾಂಕ್/ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್‌

ಕನೆಕ್ಷನ್‌ ನ್ನು ಪಡೆದುಕೊಳ್ಳಲು ಗುರುತಿನ ಪುರಾವೆಯಾಗಿ ಈ ಕೆಳಗಿನ ದಾಖಲೆಗಳಲ್ಲೊಂದರ ಅಗತ್ಯವಿದೆ.

  1. ಆಧಾರ್ ಕಾರ್ಡ್ (UID)
  2. ಪಾಸ್‌ ಪೋರ್ಟ್‌
  3. ಪಾನ್‌ ಕಾರ್ಡ್‌ ನಂಬರ್‌
  4. ಮೋಟರ್‌ ಐಡಿ ಕಾರ್ಡ್‌
  5. ಕೇಂದ್ರ / ರಾಜ್ಯದಿಂದ ನೀಡಿದ ID ಕಾರ್ಡ್
  6. ಚಾಲನಾ ಪರವಾನಗಿ / ಡ್ರೈವಿಂಗ್‌ ಲೈಸನ್ಸ್‌

ಸಹಾಯಕ ಉಪಕರಣಗಳು/ ಭದ್ರತಾ ಠೇವಣಿ

ನೋಂದಣಿ ಮತ್ತು ಡಿಡುಪ್ಲಿಕೇಶನ್‌ ಯಶಸ್ವಿಯಾದಾಗ, ವಿತರಕರು ನಿಮಗೆ SMS/ಇ-ಮೇಲ್ ಮೂಲಕ ಸೂಚನೆಯನ್ನು ಕಳುಹಿಸುತ್ತಾರೆ. ಕನೆಕ್ಷನ್‌ ಪಡೆಯಲು ನೀವು ವಿತರಕರನ್ನು ಸಂಪರ್ಕಿಸಬಹುದು.

"LPG ಸಂಪರ್ಕವನ್ನು ತಕ್ಷಣವೇ ನಿಮಗೆ ಬಿಡುಗಡೆ ಮಾಡಲಾಗುವುದು. ಆದಾಗ್ಯೂ, LPG ಸಂಪರ್ಕವನ್ನು ಬಿಡುಗಡೆ ಮಾಡುವ ಮೊದಲು, ನೀವು IS:4246 ಗೆ ಅನುಗುಣವಾಗಿ ISI ಮಾರ್ಕ್ ಹಾಟ್‌ಪ್ಲೇಟ್ ಅನ್ನು ಹೊಂದಿರಬೇಕು ಮತ್ತು IS:9573 (ಟೈಪ್ IV) ಗೆ ದೃಢೀಕರಿಸುವ ಸುರಕ್ಷಾ LPG ಮೆದುಗೊಳವೆ ಹೊಂದಿರಬೇಕು, ಹಾಗಾಗಿ ನಿಮಗೆ ಇಂಡೇನ್ ಕನೆಕ್ಷನ್‌ ಬಿಡುಗಡೆಯಾದ ತಕ್ಷಣ ಅದನ್ನು ನಿಮ್ಮ ನಿವಾಸದಲ್ಲಿ ಹಾಕಿಸಿ. ನಿಮ್ಮ LPG ಕನೆಕ್ಷನ್‌ನ್ನು ಬಿಡುಗಡೆ ಮಾಡಲು, ನೀವು ಈ ಕೆಳಗಿನ ದರಗಳಲ್ಲಿ ಭದ್ರತಾ ಠೇವಣಿ ಪಾವತಿಸಬೇಕಾಗುತ್ತದೆ:

ರಾಜ್ಯಗಳು ಸಿಲೆಂಡರ್‌ ಪ್ರೆಶರ್‌ ರೆಗ್ಯುಲೇಟರ್‌
ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ತ್ರಿಪುರ, ಅಸ್ಸಾಂ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ಮಣಿಪುರ 14.2 ಕೆಜಿ ಸಿಲಿಂಡರ್‌ಗೆ 2000ರೂ.
5 ಕೆಜಿ ಸಿಲಿಂಡರ್‌ಗೆ 1150/- ರೂ
200/- ರೂ
ಭಾರತದ ಉಳಿದ ರಾಜ್ಯಗಳು 14.2 ಕೆಜಿ ಸಿಲಿಂಡರ್‌ಗೆ 2200/- ರೂ
5 ಕೆಜಿ ಸಿಲಿಂಡರ್‌ಗೆ 1150/- ರೂ.
250/- ರೂ