"ಉತ್ತಮ ಗ್ರಾಹಕ ಸೇವಾ ಹಿತಾಸಕ್ತಿಯಲ್ಲಿ ವಿತರಕರ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉಂಟುಮಾಡುವ ಸಲುವಾಗಿ, ಗ್ರಾಹಕರು ಒಂದೇ ಪ್ರದೇಶದಲ್ಲಿ ಸೇವೆಯ ಒದಗಿಸುತ್ತಿರುವ ವಿತರಕರ ನಡುವೆ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುವಂತೆ ಪೋರ್ಟಬಿಲಿಟಿ ಆಯ್ಕೆಯನ್ನು ಒದಗಿಸಲಾಗಿದೆ. ಅಂತಹ ಸನ್ನಿವೇಶದಲ್ಲಿ ತನ್ನ ಮೂಲ ವಿತರಕರ ಸೇವೆಗಳಿಂದ ತೃಪ್ತರಾಗದ ಗ್ರಾಹಕರು ಸುಧಾರಿತ ಸೇವೆಗಳಿಗಾಗಿ ಅದೇ ಪ್ರದೇಶವನ್ನು ಸೇವೆ ಪೂರೈಸುತ್ತಿರುವ ವಿತರಕರ ಪಟ್ಟಿಯಿಂದ ಆಯ್ದ ವಿತರಕರನ್ನು ಸಂಪರ್ಕಿಸಬಹುದು. ಈ ವ್ಯವಸ್ಥೆಯಲ್ಲಿ ಗ್ರಾಹಕರನ್ನು ಕಳೆದುಕೊಳ್ಳುವ ವಿತರಕರು ಪ್ರಸ್ತುತ ಇರುವ ಗ್ರಾಹಕರನ್ನು ತಮ್ಮ ಪ್ರಾಮಾಣಿಕ ಸೇವೆಗಳೊಂದಿಗೆ ಓಲೈಸಲು ಯಾವಾಗಲೂ ಪ್ರಯತ್ನಿಸುತ್ತಾರೆ. ಇದು ಉತ್ತಮ ಗ್ರಾಹಕ ಸಂತೃಪ್ತಿಗೆ ಕಾರಣವಾಗುತ್ತದೆ ಮತ್ತು ಉತ್ತಮ ದರ್ಜೆಯ ಸೇವೆಗಳನ್ನು ಒದಗಿಸಲು ವಿತರಕರನ್ನು ಉತ್ತೇಜಿಸುತ್ತದೆ.
"
ಪೋರ್ಟಲ್ ಮತ್ತು ಆ್ಯಪ್‌ನಲ್ಲಿ ನೋಂದಾಯಿತ ಲಾಗಿನ್‌ನೊಂದಿಗೆ, ಗ್ರಾಹಕರು ಪೋರ್ಟಬಿಲಿಟಿಗಾಗಿ ಭೌತಿಕವಾಗಿ ವಿತರಕರನ್ನು ಸಂಪರ್ಕಿಸಿ,ಮುಂದಿನ ವಿತರಕರಿಗೆ ತಮ್ಮ ಇಚ್ಛೆಯ ಪ್ರಕಾರ ವರ್ಗಾವಣೆಗಾಗಿ ವಿನಂತಿಸಿ, ಅಗತ್ಯ ದಾಖಲೆಗಳನ್ನು ಒದಗಿಸುವ ತಾಪತ್ರಯ ದೂರವಾಗುತ್ತದೆ.ಗ್ರಾಹಕರು ಡಿಜಿಟಲ್ ಮಾಧ್ಯಮದ ಮೂಲಕ ಸುಲಭವಾಗಿ ಈ ಪ್ರಕ್ರಿಯೆಯನ್ನು ಪೂರೈಸಿಕೊಳ್ಳಬಹುದು.
ಇಂಟ್ರಾ ಕಂಪನಿ ಪೋರ್ಟಬಿಲಿಟಿ ಆಯ್ಕೆ ಆನ್‌ಲೈನ್‌ನಲ್ಲಿಯೇ ಲಭ್ಯವಾಗಿರುವುದರಿಂದ, ವಿತರಕರನ್ನು ಬದಲಾಯಿಸಲು ಬಯಸುವ ಗ್ರಾಹಕರು ಪೋರ್ಟಲ್ ಅಥವಾ ಅಪ್ಲಿಕೇಶನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಅದನ್ನು ಪೋಷಕ ವಿತರಕರು ಸ್ವೀಕರಿಸದಿದ್ದರೂ ಸಹ ಸ್ವಯಂಚಾಲಿತ ವರ್ಗಾವಣೆ ಪ್ರಕ್ರಿಯೆಯಾಗಿ ಪರಿವರ್ತಿಸಲಾಗುತ್ತದೆ. ಗ್ರಾಹಕರು ತಮ್ಮ ಆಯ್ಕೆಯ ವಿತರಕರಿಂದ ತರುವಾಯ ಎಲ್ಲಾ ಸೇವೆಗಳನ್ನು ಪಡೆಯಬಹುದು.
ಪೋರ್ಟೆಬಿಲಿಟಿಗಾಗಿ ನೋಂದಾಯಿಸಲು, ಗ್ರಾಹಕರು ಈ ಕೆಳಗಿನವುಗಳನ್ನು ಮಾಡಬೇಕಾಗುತ್ತದೆ:
- OMC ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ:
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- ನಿಮ್ಮ ಪ್ರದೇಶದಲ್ಲಿ ಸೇವೆ ನೀಡುತ್ತಿರುವ ವಿತರಕರ ಪಟ್ಟಿಯನ್ನು ಮತ್ತು ರಿಫಿಲ್ಲಿಂಗ್ ಕಾರ್ಯಕ್ಷಮತೆಯ ವಿಷಯದಲ್ಲಿ ಅವರ ಸ್ಟಾರ್ ರೇಟಿಂಗ್ ಅನ್ನು ಗಮನಿಸಿ (5 ಸ್ಟಾರ್- ಅತ್ಯುತ್ತಮ, 4 ಸ್ಟಾರ್- ಉತ್ತಮ, 3 ಸ್ಟಾರ್- ಸರಾಸರಿ, 2 ಸ್ಟಾರ್- ಸರಾಸರಿಗಿಂತ ಕಡಿಮೆ ಮತ್ತು 1 ಸ್ಟಾರ್ - ಕಳಪೆ).
- ಪಟ್ಟಿಯಿಂದ ಆಯ್ಕೆಯ ವಿತರಕರನ್ನು ಆರಿಸಿ.
- ನಂತರ ಚಂದಾದಾರರಿಗೆ ಪೋರ್ಟಬಿಲಿಟಿ ವಿನಂತಿ ಮತ್ತು ಸ್ಥಿತಿ ನವೀಕರಣದ ದೃಢೀಕರಣದ ಇಮೇಲ್ ಸಿಗುತ್ತದೆ.
- ಇಂಟ್ರಾ ಕಂಪನಿ ಪೋರ್ಟಬಿಲಿಟಿ ವಿನಂತಿಯ ಸಂದರ್ಭದಲ್ಲಿ, ಗ್ರಾಹಕರು ಮೂಲ ವಿತರಕರು ಅಥವಾ ಆಯ್ಕೆ ಮಾಡಿದ ವಿತರಕರ ಬಳಿಗೆ ಹೋಗಬೇಕಾಗಿಲ್ಲ, ಏಕೆಂದರೆ ಎಲ್ಲಾ ದಾಖಲೆಗಳನ್ನು ಡಿಜಿಟಲ್ ಆಗಿ ವರ್ಗಾಯಿಸಲಾಗುತ್ತದೆ.
- ಪೋರ್ಟಬಿಲಿಟಿ ಯೋಜನೆಯಡಿಯಲ್ಲಿ ಸಂಪರ್ಕವನ್ನು ವರ್ಗಾವಣೆ ಮಾಡಲು ಯಾವುದೇ ವರ್ಗಾವಣೆ ಶುಲ್ಕ ಅಥವಾ ಹೆಚ್ಚುವರಿ ಭದ್ರತಾ ಠೇವಣಿ ವಿಧಿಸಲಾಗುವುದಿಲ್ಲ.
- ಎಸ್ಕಲೇಶನ್ ಮ್ಯಾಟ್ರಿಕ್ಸ್‌ನೊಂದಿಗಿನ ಪೋರ್ಟಬಿಲಿಟಿ ವಿನಂತಿಯ ಸಕ್ರಿಯ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಮತ್ತು ಇದನ್ನು ಮುಕ್ತಾಯಗೊಳಿಸುವುದು, ಗ್ರಾಹಕನು ತನ್ನ ಆಯ್ಕೆಯ ವಿತರಕರನ್ನು ಸಂಪರ್ಕಿಸಲು ಯಾವುದೇ ರೀತಿಯ ತೊಂದರೆಯನ್ನು ಎದುರಿಸಲಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.
ಈ ಕ್ರಮವು ವಿತರಕರಿಂದ ಗ್ರಾಹಕ ಸೇವೆಯಲ್ಲಿ ಉತ್ಕೃಷ್ಟತೆಯನ್ನು ತರುತ್ತದೆ ಏಕೆಂದರೆ ಇದು ಆಯಾ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧ ವಿತರಕರ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ತರುತ್ತದೆ ಮತ್ತು ತೈಲ ಕಂಪನಿಯೊಳಗೆ ತಮ್ಮ ಎಲ್‌ಪಿಜಿ ವಿತರಕರನ್ನು ಅಥವಾ ಅವರ ಹತ್ತಿರದ ವಿತರಕರನ್ನು ಬದಲಾಯಿಸಲು ಬಯಸುವ ಗ್ರಾಹಕರಿಗೆ ಆಯ್ಕೆಗಳನ್ನು ನೀಡುತ್ತದೆ.
ಇಂಟ್ರಾ ಕಂಪನಿ ರೀಫಿಲ್ ಬುಕಿಂಗ್ ಪೋರ್ಟೆಬಿಲಿಟಿ
- ಮೇಲಿನ ಪೋರ್ಟಬಿಲಿಟಿ ಆಯ್ಕೆಗಿಂತ ಭಿನ್ನವಾಗಿ, ಗ್ರಾಹಕರು ಒಬ್ಬ ವಿತರಕರಿಂದ ಇನ್ನೊಬ್ಬ ವಿತಕರರಿಗೆ ಬದಲಾಯಿಸಿಕೊಳ್ಳಬಹುದು, ರಿಫಿಲ್ಲಿಂಗ್ ಪೋರ್ಟಬಿಲಿಟಿ ನಿರ್ದಿಷ್ಟ ಮರುಪೂರಣದ ವಿತರಣೆಗೆ ಮಾತ್ರ ವಿತರಕರ ಬದಲಾವಣೆಯನ್ನು ಅನುಮತಿಸುತ್ತದೆ.
- ಈ ಸೌಲಭ್ಯವು ಪ್ರಸ್ತುತ 5 ನಗರಗಳಲ್ಲಿ ಲಭ್ಯವಿದೆ - ಚಂಡೀಗಢ, ಕೊಯಮತ್ತೂರು, ಗುರ್ಗಾಂವ್, ಪುಣೆ ಮತ್ತು ರಾಂಚಿ.
- ಗ್ರಾಹಕರು ತಮ್ಮ ವಿಳಾಸಕ್ಕೆ ಸೇವೆ ಒದಗಿಸುವ ಇಂಡೇನ್ ವಿತರಕರ ಪಟ್ಟಿಯಿಂದ ತಮ್ಮ ವಿತರಕರನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಗ್ರಾಹಕರು ನೋಂದಾಯಿತ ಲಾಗಿನ್ ಅನ್ನು ಬಳಸಿಕೊಂಡು ಮೊಬೈಲ್ ಅಪ್ಲಿಕೇಶನ್/ಗ್ರಾಹಕ ಪೋರ್ಟಲ್ ಮೂಲಕ ರೀ-ಫಿಲ್ಲಿಂಗ್ ಬುಕ್ ಮಾಡುವಾಗ, ಅವರ ಕಾರ್ಯಕ್ಷಮತೆಯ ರೇಟಿಂಗ್ನೊಂದಿಗೆ ಸೇವೆ ಸಲ್ಲಿಸುವ ವಿತರಕರ ಪಟ್ಟಿಯನ್ನು ಪ್ರದರ್ಶಿಸಲಾಗುತ್ತದೆ. ಗ್ರಾಹಕನು ತನ್ನ ಪ್ರಸ್ತುತ ರೀಫಿಲ್ ಬುಕಿಂಗ್ನ ವಿತರಣೆಯನ್ನು ಪಡೆಯಲು ಪಟ್ಟಿಯಿಂದ ಯಾವುದೇ ಇಂಡೇನ್ ವಿತರಕರನ್ನು ಆರಿಸಿಕೊಳ್ಳಬಹುದು.
- ಗ್ರಾಹಕರ ಬಳಿ ಡಿಲಿವರಿ ಪಾರ್ಟ್ನರ್ನ್ನು ಅಯ್ಕೆ ಮಾಡುವ ಹಕ್ಕು ಇರುವುದರಿಂದ, ಗ್ರಾಹಕರಿಗೆ ಉತ್ತಮ ದರ್ಜೆಯ ಸೇವೆಗಳನ್ನು ಒದಗಿಸಲು ಮತ್ತು ಅವರ ಕಾರ್ಯಕ್ಷಮತೆಯ ರೇಟಿಂಗ್ಗಳನ್ನು ಸುಧಾರಿಸಿಕೊಳ್ಳಲು ವಿತರಕರನ್ನು ಮತ್ತಷ್ಟು ಪ್ರೇರೇಪಿಸುತ್ತದೆ.